ಆದಿ ಶಿಲಾಯುಧ
	ಇಂಗ್ಲೆಂಡಿನ ಕೆಂಟ್, ನಾರ್‍ಫೋಕ್ ಮತ್ತು ಸಫೋಕ್‍ಗಳ ಹೊಲಗಳಲ್ಲಿ ಸುಮಾರು 500 ಸಹಸ್ರ ವರ್ಷಗಳಿಗೂ ಹಿಂದಿನ ಭೂಪದರಗಳಲ್ಲಿ ಸಿಕ್ಕಿದ ಹಲವು ಚಕ್ಕೆ ಎಬ್ಬಿಸಿದ ಕಲ್ಲುಗಳನ್ನು ಅತ್ಯಂತ ಪ್ರಾಚೀನ ಶಿಲಾಯುಧಗಳೆಂದು ಪರಿಗಣಿಸುತ್ತಾರೆ. ಮೊದಲು ಇವುಗಳ ಅಧ್ಯಯನ ಮಾಡಿದವ ಬೆಂಜûಮಿನ್ ಹ್ಯಾರಿಸನ್ (1865). ಇಂಥ ಕಲ್ಲುಗಳು ಫ್ರಾನ್ಸ್, ಪೋರ್ಚುಗಲ್ ಮತ್ತು ಇನ್ನೂ ಇತರ ಯೂರೋಪು ಭಾಗಗಳಲ್ಲಿ ದೊರೆತಿವೆ. ಇವು ಮಾನವನಿರ್ಮಿತವೇ ಅಥವಾ ಸ್ವಾಭಾವಿಕವಾದುವೇ ಎಂಬ ಬಗ್ಗೆ ಬಹಳ ವಿವಾದಗಳಿವೆ. ಲಕ್ಷಣಗಳನ್ನು ಗಮನಿಸಿದರೆ ಇವು ಮಾನವನಿರ್ಮಿತ ಆಯುಧಗಳಂತೆ ಕಾಣುವುವು. ತನಗೆ ಉಪಯುಕ್ತವೆಂದು ಕಂಡುಬಂದವನ್ನು ಮಾನವ ಆಯ್ದು ಬಳಸಿಕೊಳ್ಳುತ್ತಿದ್ದನೆಂದು ತೋರುತ್ತದೆ. 					
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ